ಮಕ್ಕಳ ಹಕ್ಕುಗಳು

***ರಾಷ್ಟ್ರೀಯ ಆಯೋಗ ***
ಆದೇಶ

ಅಧಿನಿಯಮದಲ್ಲಿ ಸೂಚಿಸಿದಂತೆ ಆಯೋಗದ ಕಾರ್ಯಗಳು ಈ ಕೆಳಗಿನಂತಿವೆ.ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಯಾವುದಾದರೂ ಕಾನೂನಿನಿಂದ ಅಥವಾ ಕಾನೂನಿನ ಅಡಿಯಲ್ಲಿ ಒದಗಿಸಲಾಗ ರಕ್ಷಣೆಗಳು ಪರಿಶೀಲನೆ ಮತ್ತು ಪರಿಷ್ಕರಣೆ ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರಮಗಳ ಶಿಫಾರಸು ಮತ್ತು ಈ ರಕ್ಷಣೆಗಳ ಕಾರ್ಯವಿಧಾನದ ಬಗ್ಗೆ ಕೇಂದ್ರಸರ್ಕಾರಕ್ಕೆ ವರದಿಗಳನ್ನು ನೀಡುವುದು.ಭಯೋತ್ಪಾದನೆ, ಕೋಮುಗಲಭೆ, ದಂಗೆಗಳು, ಪ್ರಾಕೃತಿಕ ವಿಕೋಪಗಳು, ಸ್ವಗೃಹದಲ್ಲಿನ ಹಿಂಸೆ, ಹೆಚ್.ಐ.ವಿ/ ಏಡ್ಸ್, ಮಕ್ಕಳ ಕಳ್ಳಸಾಗಣೆ, ಅನುಚಿತ ವರ್ತನೆ, ಹಿಂಸೆ ಮತ್ತು ಶೋಷಣೆ, ಅಶ್ಲೀಲ ಸಾಹಿತ್ಯ, ಮತ್ತು ವೇಶ್ಯಾವೃತ್ತಿಗಳಿಂದ ಪ್ರಭಾವಿತರಾಗಿ ಮಕ್ಕಳು ಹಕ್ಕುಗಳನ್ನು ಅನುಭವಿಸುವುದಕ್ಕೆ ತಡೆಯೊಡ್ಡುವಂತಹ ಎಲ್ಲ ಅಂಶಗಳನ್ನು ಪರಿಶೀಲಿಸಿ ಸೂಕ್ತಪರಿಹಾರೋಪಾಯಗಳನ್ನು ಶಿಫಾರಸು ಮಾಡುವುದು.ಸಂಕಷ್ಟದಲ್ಲಿರುವ ಮಕ್ಕಳು, ಅಲಕ್ಷ್ಯಕ್ಕೆ ಒಳಗಾದ ಮತ್ತು ಅವಕಾಶ ವಂಚಿತ ಮಕ್ಕಳು, ನಿರ್ಗತಿಕ ಮಕ್ಕಳು ಮತ್ತು ಖೈದಿಗಳ ಮಕ್ಕಳಿಗೆ ಸಂಬಂಧಿಸಿದ ವಿಷಯಗಳನ್ನು ಅವಲೋಕಿಸಿ ಸೂಕ್ತ ಪರಿಹಾರ ವಿಧಾನಗಳನ್ನು ಶಿಫಾರಸು ಮಾಡುವುದು ಮಕ್ಕಳ ಹಕ್ಕುಗಳ ಪರಿಜ್ಞಾನವನ್ನು ಸಮಾಜದ ವಿವಿಧ ಭಾಗಗಳಲ್ಲಿ ಪ್ರಸಾರಗೊಳಿಸಿ ಮಕ್ಕಳಿಗೆ ಇರುವ ರಕ್ಷಣೆಗಳು ಮತ್ತು ಹಕ್ಕುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು.

ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟ ಅಥವಾ ಯಾವುದಾದರೂ ಪ್ರಾಧಿಕಾರದ ಯಾವುದಾದರೂ ಬಾಲಾಪರಾಧಿಗೃಹ ಅಥವಾ ಯಾವುದಾದರೂ ಮಕ್ಕಳ ನಿವಾಸಕ್ಕಾಗಿ ಇರುವ ಸ್ಥಳ ಅಥವಾ ಸಂಸ್ಥೆ ಅಥವಾ ಯಾವುದಾದರೂ ಸಾಮಾಜಿಕ ಸಂಸ್ಥೆಯಿಂದ ನಡೆಸಲ್ಪಡುತ್ತಿರುವ ಮಕ್ಕಳ ಸುಧಾರಣಾ ಕೇಂದ್ರ ಇವುಗಳ ತಪಾಸಣೆ ಅಥವಾ ತಪಾಸಣೆಗೆ ಕಾರಣರಾಗುವುದು.ಮಕ್ಕಳ ಹಕ್ಕುಗಳ ಉಲ್ಲಂಘನೆಯಾದ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಿ ಅಂತಹ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವುದು ಮತ್ತು ಮಕ್ಕಳ ಹಕ್ಕುಗಳ ಅಪಹರಣ ಅಥವಾ ಉಲ್ಲಂಘನೆ ಮಕ್ಕಳ ಸಂರಕ್ಷಣೆ ಮತ್ತು ಬೆಳವಣಿಗೆಗೆ ಪೂರಕವಾದ ಕಾನೂನುಗಳನ್ನು ಅನುಷ್ಠಾನಕ್ಕೆ ತರದಿರುವುದು ಮಕ್ಕಳ ಕೋಟಲೆಗಳನ್ನು ಕಡಿಮೆಗೊಳಿಸುವ ಮತ್ತು ಮಕ್ಕಳ ಕಲ್ಯಾಣವನ್ನು ಖಾತ್ರಿಪಡಿಸುವ ನೀತಿ ನಿರ್ಧಾರಗಳು, ಮಾರ್ಗಸೂಚಿಗಳು ಮತ್ತು ಸೂಚನೆಗಳ ಅನುಸರಣೆ ಮಾಡದಿರುವುದು ಮತ್ತು ಅಂತಹ ಮಕ್ಕಳೀಗೆ ಪರಿಹಾರ ಒದಗಿಸುವುದು ಅಥವಾ ಅಂತಹ ವಿಷಯಗಳಿಂದ ಉದ್ಭವವಾದ ಸಮಸ್ಯೆಗಳನ್ನು ಸೂಕ್ತ ಪ್ರಾಧಿಕಾರಗಳಿಗೆ ತೆಗೆದುಕೊಂಡು ಹೋಗುವುದು.ಈ ವಿಚಾರಗಳಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ನಿರ್ಧಾರಗಳನ್ನು ಕೈಗೊಳ್ಳುವುದು.ಒಪ್ಪಂದಗಳು ಮತ್ತು ಅಂತಾರಾಷ್ಟ್ರೀಯ ಕಾನೂನುಗಳನ್ನು ಅಧ್ಯಯನ ಮಾಡುವುದು,

ಮಕ್ಕಳ ಹಕ್ಕುಗಳ ಪ್ರಸ್ತುತ ನೀತಿಗಳು, ಕಾರ್ಯಕ್ರಮಗಳು ಮತ್ತು ಇತರ ಚಟುವಟಿಕೆಗಳ ಬಗ್ಗೆ ಆಗಾಗ್ಗೆ ಪರಿಷ್ಕರಣೆ ಕೈಗೊಳ್ಳುವುದು ಮತ್ತು ಅವುಗಳ ಪರಿಣಾಮಕಾರೀ ಅನುಷ್ಠಾನಕ್ಕೆ ಮಕ್ಕಳ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಫಾರಸುಗಳನ್ನು ಮಾಡುವುದು.ಪ್ರಸ್ತುತ ಕಾನೂನು, ನೀತಿ ಮತ್ತು ಆಚರಣೆಗಳನ್ನು ಅವುಗಳ ಅನುಸರಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತು ಮಗುವಿನ ಹಕ್ಕುಗಳ ಹಿನ್ನಲೆಯಲ್ಲಿ, ವಿಶ್ಲೇಷಣೆ ಮಾಡುವುದು. ವಿಚಾರಣೆಗಳನ್ನು ಕೈಗೆತ್ತಿಕೊಂಡು ಮಕ್ಕಳ ಮೇಲೆ ಪ್ರಭಾವ ಬೀರುವ ಯಾವುದಾದರೂ ವಿಷಯಾಂಶ, ನೀತಿ ಅಥವಾ ಆಚರಣೆಯನ್ನು ಕುರಿತು ವರದಿಗಳನ್ನು ಸಿದ್ಧಪಡಿಸುವುದು ಮತ್ತು ಮಕ್ಕಳ ಹಕ್ಕುಗಳ ಹಿನ್ನಲೆಯಲ್ಲಿ ಪ್ರಸ್ತಾಪಿಸಲ್ಪಟ್ಟ ಹೊಸ ವಿಧಿವಿಧಾನಗಳ ರಚನೆಯನ್ನು ವಿಮರ್ಶಿಸುವುದು.ಮಕ್ಕಳ ವಿಷಯವಾಗಿ ಕಾರ್ಯಮಾಡುತ್ತಿರುವ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಕಾರ್ಯ ನಿರ್ವಹಣೆಯಲ್ಲಿ ಮಕ್ಕಳ ದೃಷ್ಟಿಕೋನವನ್ನು ಪರಿಗಣಿಸಿ ಅದರ ಬಗ್ಗೆ ಗೌರವತೋರುವ ಮನೋಭಾವನೆಯನ್ನು ಬೆಳೆಸುವುದು ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿಗಳನ್ನು ಸಿದ್ಧಪಡಿಸುವುದು ಮತ್ತು ಪ್ರಚಾರಗೊಳಿಸುವುದು ಮಕ್ಕಳ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸುವುದು ಮತ್ತು ವಿಶ್ಲೇಷಿಸುವುದು ಮತ್ತು ಶಾಲೆಯ ಪಠ್ಯಕ್ರಮ, ಶಿಕ್ಷಕರ ತರಬೇತಿ ಮತ್ತು ಮಕ್ಕಳ ವಿಷಯವಾಗಿ ಕೆಲಸ ನಿರ್ವಹಿಸುವವರ ತರಬೇತಿಗಳಲ್ಲಿ ಮಕ್ಕಳ ಹಕ್ಕುಗಳನ್ನು ಸೇರಿಸುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳುವುದು.
ಸಂರಚನೆ

ಮೂರು ವರ್ಷಗಳ ಅವಧಿಗೆ ನೇಮಕಮಾಡಿದ ಈ ಕೆಳಕಂಡ ಸದಸ್ಯರುಗಳನ್ನು ಆಯೋಗ ಹೊಂದಿರುತ್ತದೆ. ಮಕ್ಕಳ ಕಲ್ಯಾಣಕ್ಕಾಗಿ ಮುಖ್ಯವಾದ ಕೆಲಸಮಾಡಿದ ಪ್ರಸಿದ್ಧ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿಸುವುದು.ಶಿಕ್ಷಣ, ಮಕ್ಕಳ ಆರೋಗ್ಯ, ಕಲ್ಯಾಣ, ಅಭಿವೃದ್ಧಿ, ಪೋಷಣೆ, ಮಕ್ಕಳ ನ್ಯಾಯ, ನಿರ್ಲಕ್ಷಿತ ಮಕ್ಕಳ ಆರೈಕೆ, ಅಲಕ್ಷಿತ ಮಕ್ಕಳ ಸಂರಕ್ಷಣೆ, ವಿಕಲ ಚೇತನರ ಆರೈಕೆ, ಬಾಲದುಡಿಮೆಯ ನಿವಾರಣೆ, ಶಿಶು ಮನಃಶಾಸ್ತ್ರ ಮತ್ತು ಮಕ್ಕಳಿಗಾಗಿ ರಚಿತ ಕಾನೂನು ಈ ರಂಗಗಳಲ್ಲಿ ಒಂದರಲ್ಲಾದರೂ ಪರಿಣತರಾದ, ಶೇಷ್ಠ, ಪ್ರಾಮಾಣಿಕ, ಪ್ರಸಿದ್ಧ ಆರು ಜನ ಸದಸ್ಯರು ಸಹಕಾರ್ಯದರ್ಶಿಯ ದರ್ಜೆಗೆ ಕಡಿಮೆಯಿರದ ಸದಸ್ಯ ಕಾರ್ಯದರ್ಶಿ
ಅಧಿಕಾರ

ಒಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿವಿಲ್ ನ್ಯಾಯಾಲಯವು ಹೊಂದಿರುವ ಎಲ್ಲ ಅಧಿಕಾರಗಳನ್ನೂ ಆಯೋಗವು ಹೊಂದಿರುತ್ತದೆ ಮತ್ತು ಈ ಕೆಳಕಂಡ ಅಧಿಕಾರಗಳನ್ನು ನಿರ್ದಿಷ್ಟವಾಗಿ ಹೊಂದಿರುತ್ತದೆ ಭಾರತದ ಯಾವುದೇ ಪ್ರದೇಶದಿಂದ ಒಬ್ಬ ವ್ಯಕ್ತಿಯನ್ನು ಕರೆಸಿ ಕೊಳ್ಳುವ, ಅವರ ಹಾಜರಾತಿಯನ್ನು ಕಡ್ಡಾಯಗೊಳಿಸಿ ಪ್ರತಿಜ್ಞಾ ವಿಧಿಯನಂತರ ಅವರನ್ನು ವಿಚಾರಿಸುವುದು ಯಾವುದೇ ದಾಖಲೆಯನ್ನು ಹುಡುಕಿ ಪ್ರಸ್ತುತ ಪಡಿಸಲು ಕ್ರಮತೆಗೆದುಕೊಳ್ಳುವುದುಶಪಥ ಪತ್ರಗಳ ಮೇಲೆ ಪುರಾವೆಗಳನ್ನು ಸ್ವೀಕರಿಸುವುದು ಯಾವುದೇ ನ್ಯಾಯಾಲಯ ಕಚೇರಿಯಿಂದ ಯಾವುದೇ ಸಾರ್ವಜನಿಕ ದಾಖಲೆ ಅಥವಾ ಅದರ ಪ್ರತಿಯನ್ನು ತರಿಸಿಕೊಳ್ಳುವುದು ದಾಖಲೆಗಳು ಮತ್ತು ಸಾಕ್ಷೀದಾರರನ್ನು ಪರೀಕ್ಷಿಸಲು ಕಮೀಷನ್ ಗಳನ್ನು ಜಾರಿಗೊಳಿಸುವುದು ಇದೇ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಕ್ಷೇತ್ರಾಧಿಕಾರವುಳ್ಳ ಮ್ಯಾಜಿಸ್ಟ್ರೇಟರಿಗೆ ಪ್ರಕರಣವನ್ನು ಹಸ್ತಾಂತರಿಸುವುದು.ಅಂತಹ ನ್ಯಾಯಾಲಯವು ಅಪೇಕ್ಷಿಸಿದಲ್ಲಿ ಸಂಬಂಧಿಸಿದ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯಕ್ಕೆ ಅಗತ್ಯ ಆದೇಶ ಅಥವಾ ನಿರ್ದೇಶ ಅಥವಾ ಲೇಖವನ್ನು ಪಡೆಯಲು ಮೊರೆಹೋಗಬಹುದು.
ದೂರು ನೀಡುವ ವಿಧಾನ

ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುವ ಗುರುತರ ಪ್ರಕರಣಗಳನ್ನು ಪ್ರಜ್ನಾಪೂರ್ವಕವಾಗಿ ಸ್ವಯಂಪ್ರೇರಿತವಾಗಿ ಆಯೋಗವು ಗುರುತಿಸಬೇಕು ಅಲ್ಲದೇ ಮಕ್ಕಳು ಹಕ್ಕುಗಳನ್ನು ಅನುಭವಿಸಲು ತಡೆಯೊಡ್ಡುವ ಅಂಶಗಳನ್ನು ಪರಿಶೀಲಿಸಬೇಕು ಸಂವಿಧಾನದ 8 ನೇ ಅನುಸೂಚಿಯಲ್ಲಿನ ಯಾವುದೇ ಭಾಷೆಯಲ್ಲಿ ಆಯೋಗಕ್ಕೆ ದೂರು ನೀಡಬಹುದು ಅಂತಹ ದೂರುಗಳನ್ನು ನೀಡಲು ಯಾವುದೇ ಶುಲ್ಕ ನೀಡಬೇಕಾಗಿಲ್ಲ ದೂರಿಗೆ ಕಾರಣವಾದ ವಿಷಯದ ಸಂಪೂರ್ಣ ಚಿತ್ರವನ್ನು ದೂರಿನಲ್ಲಿ ನೀಡಬೇಕು ಅಗತ್ಯವೆನಿಸಿದಲ್ಲಿ ಆಯೋಗವು ಹೆಚ್ಚಿನ ವಿವರಗಳನ್ನು / ಶಪಥ ಪತ್ರಗಳನ್ನು ಆಯೋಗ ಕೇಳಬಹುದು ದೂರು ನೀಡುವಾಗ ಇವುಗಳನ್ನು ದಯವಿಟ್ಟು ಖಾತ್ರಿ ಮಾಡಿಕೊಳ್ಳಿರಿ ಸ್ಪಷ್ಟ ಮತ್ತು ಓದಲಾಗುವಂತಿರಬೇಕು, ಅಸ್ಪಷ್ಟವಾಗಿರಬಾರದು. ಅನಾಮಧೇಯ ಅಥವಾ ಬೇನಾಮಿ ದೂರು ಆಗಿರಬಾರದು ಇಂತಹ ದೂರುಗಳನ್ನು ನೀಡಲು ಯಾವುದೇ ಶುಲ್ಕ ವಿಧಿಸುವಂತಿಲ್ಲ

ಕೈಗೆತ್ತಿಕೊಂಡ ಪ್ರಕರಣವು ಆಸ್ತಿಯ ಹಕ್ಕುಗಳು, ಗುತ್ತಿಗೆಗೆ ಸಂಬಂಧಿಸಿದ ಭಾಧ್ಯತೆಗಳಂತಹ ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿರಬಾರದು.ಕೈಗೆತ್ತಿಕೊಂಡ ಪ್ರಕರಣವು ಸೇವಾವಿಷಯಗಳಿಗೆ ಸಂಬಂಧಿಸಿರಬಾರದು ಪ್ರಕರಣವು ಕಾನೂನಿಗೆ ಅನ್ವಯವಾಗಿ ರಚಿಸಲ್ಪಟ್ಟ ಬೇರೇ ಯಾವುದೇ ಆಯೋಗದ ಮುಂದೆ ಇರಬಾರದು ಅಥವಾ ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣದಲ್ಲಿ ವಿಚಾರಣಾಧೀನವಾಗಿರಬಾರದು ಪ್ರಕರಣವು ಇದೇ ಆಯೋಗದಿಂದ ಈ ಮೊದಲೇ ತೀರ್ಮಾನಿಸಿದುದಾಗಿರಬಾರದು ಬೇರೆ ಯಾವುದೇ ಆಧಾರದಲ್ಲಿ ಆಯೋಗದ ವ್ಯಾಪ್ತಿಯಿಂದ ಆಚೆ ಇರಬಾರದು

ದೂರುಗಳನ್ನು  ಸಂಪರ್ಕಿಸಿ :
ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗದ 5 ನೇ ಮಹಡಿ,
ಚಂದೆರ್ಲೋಕ್ ಕಟ್ಟಡ, 36 ಜನಪಥ್
ದೆಹಲಿ -೧೧೦೦೦೧
ದೂರವಾಣಿ: 011-23478200
ಫ್ಯಾಕ್ಸ್: 011-23724026
ದೂರು: www.ebaalnidan.nic.in
_____________________________

**ಮಕ್ಕಳ ಹಕ್ಕುಗಳು **

ಮಗುವೆಂದರೆ ಯಾರು ?

ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ  ೧೮ ವರ್ಷದೊಳಗಿನ ಎಲ್ಲ ಮಾನವ ಜೀವಿಗಳು.  ಇದು ಜಗತ್ತಿನಾದ್ಯಂತ ಒಪ್ಪಿತವಾದ  ಮಗುವಿನ ನಿರೂಪಣೆ ಮತ್ತು ಇದು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ .(UNCRC)   ಹೊರಹೊಮ್ಮಿದೆ. ಅಂತರಾಷ್ಟ್ರೀಯ ಕಾನೂನು ಸಾಧನ, ಬಹುತೇಕ ರಾಷ್ಟ್ರಗಳ ಒಪ್ಪಿಗೆ ಮತ್ತು  ಅನುಮೋದನೆ ಪಡೆದಿದೆ ಭಾರತವು ೧೮ ವರ್ಷದೊಳಗಿನ   ವ್ಯಕ್ತಿಗಳ ಗುಂಪನ್ನು  ಸದಾ  ಕಾನೂನು ಸಮ್ಮತ  ವಿಭಿನ್ನ  ಘಟಕ ಎಂದು ಪರಿಗಣಿಸಿದೆ. ಅದಕ್ಕಾಗಿಯೇ ಅವರು  ಮತದಾನದ ಹಕ್ಕು ,ವಾಹನ ಚಾಲನಾ ಪರವಾನಿಗೆ   ಅಥವ ಕಾನೂನು ಸಮ್ಮತ  ಒಪ್ಪಂದ  ಮಾಡಿಕೊಳ್ಳಲು  ೧೮ ವರ್ಷ ಪೂರೈಸಿರಬೇಕು.  ಹುಡುಗಿಗೆ  ೧೮ ವರ್ಷ,  ಹುಡುಗನಿಗೆ ೨೧ ವರ್ಷ ಆಗದೆ ಇದ್ದರೆ ಬಾಲ್ಯವಿವಾಹ ಕಾಯಿದೆ೧೯೨೯ರ ಪ್ರಕಾರ ಮದುವೆಯಾಗುವ ಹಾಗಿಲ್ಲ. ಅದೂ ಅಲ್ಲದೆ ೧೯೯೨ ರಲ್ಲಿ UNCRC ಯನ್ನು  ಅನುಮೋದನೆ ಮಾಡಿದ ನಂತರ, ಭಾರತವು   ಬಾಲಾಪರಾಧ ನ್ಯಾಯಕ್ಕೆ  ಅನುಗುಣವಾಗಿ ಕಾಯಿದೆಯನ್ನು ಬದಲಾಯಿಸಿದೆ.ಇದರಿಂದ ೧೮ ವರ್ಷದೊಳಗಿನವರಿಗೆ ಅಗತ್ಯವಾದ  ರಕ್ಷಣೆ ಮತ್ತು ಆರೈಕೆಯನ್ನು ದೊರಕುವುದನ್ನು ಖಚಿತ ಪಡಿಸಿಕೊಳ್ಳಲು, ಮತ್ತು ಅದನ್ನು ರಾಜ್ಯದಿಂದ ಪಡೆಯಲು ಅವರಿಗೆ ಅರ್ಹತೆ ಇದೆ. ಆದರೆ ಇನ್ನೂ ಅನೇಕ ಕಾಯಿದೆಗಳು ಮಗುವನ್ನು ವಿಭಿನ್ನವಾಗಿ ಅರ್ಥೈಸಿವೆ. ಮತ್ತು ಅವೆಲ್ಲವನ್ನೂ UNCRC.ಗೆ ಅನುಗುಣವಾಗಿರುವಂತೆ ಮಾಡಬೇಕಿದೆ. ಆದರೆ , ಈ ಮೊದಲೇ ಹೇಳಿದಂತೆ ಕಾನೂನಿನ ಪ್ರಕಾರ ಪ್ರಾಪ್ತ  ವಯಸ್ಕರಾಗಲು ಗಂಡುಹುಡುಗರಿಗೆ ೨೧ ವರ್ಷ ಹೆಣ್ಣು ಹುಡುಗಿಯರಿಗೆ ೧೮ ವರ್ಷ ಅಗತ್ಯ. ಇದರಂತೆ ೧೮ ವರ್ಷದ ಕೆಳಗಿನ ಗ್ರಾಮ / ಪಟ್ಟಣ / ನಗರದಲ್ಲಿನ ಎಲ್ಲ ವ್ಯಕ್ತಿಗಳನ್ನು ಮಕ್ಕಳೆಂದು ಪರಿಗಣಿಸಬೇಕು ಮತ್ತು ನಿಮ್ಮ ಸಹಾಯ ಮತ್ತು ಆಸರೆಯ ಅವರಿಗೆ  ಅಗತ್ಯ.ಒಬ್ಬ ವ್ಯಕ್ತಿಯನ್ನು  ಮಗು ಎಂದು ಪರಿಗಣಿಸಲು ಅವನ ವಯಸ್ಸೇ ಅತಿ ಮುಖ್ಯ.  ಒಬ್ಬ ೧೮ ವರ್ಷದ ಒಳಗಿನ ವ್ಯಕ್ತಿಯು  ಮದುವೆಯಾಗಿ ಮಕ್ಕಳನ್ನು ಪಡೆದಿದ್ದರೂ ಕೂಡಾ ಅಂತರಾಷ್ಟ್ರೀಯ ಮಾಪನಕ್ಕೆ ಅನುಗುಣವಾಗಿ ಅವನನ್ನು ಮಗು ಎಂದೆ ಗುರುತಿಸಲಾಗುವುದು.ಮುಖ್ಯ ಅಂಶಗಳು ೧೮ ವರ್ಷದೊಳಗಿನ ಎಲ್ಲ ವ್ಯಕ್ತಿಗಳು  ಮಕ್ಕಳೇ. ಬಾಲ್ಯವು ಎಲ್ಲ ವ್ಯಕ್ತಿಗಳೂ ಹಾದು ಹೋಗುವ ಒಂದು ಹಂತ. ಮಕ್ಕಳಿಗೆ ಬಾಲ್ಯದಲ್ಲಿ ವಿಭಿನ್ನವಾದ ಅನುಭವಗಳಾಗುತ್ತವೆ. ಎಲ್ಲ ಮಕ್ಕಳಿಗೂ ದುರ್ಬಳಕೆ ಮತ್ತು ಶೋಷಣೆಯ ವಿರುದ್ಧ ರಕ್ಷಣೆ ಬೇಕಾಗುತ್ತದೆ.
ಮಕ್ಕಳಿಗೆ ವಿಶೇಷ ಗಮನ ಏಕೆ ಬೇಕು?

ಮಕ್ಕಳು ತಾವು ವಾಸಿಸುವಲ್ಲಿನ ಪರಿಸ್ಥಿತಿಯಿಂದ  ವಯಸ್ಕರಿಗಿಂತ ಹೆಚ್ಚಾಗಿ ಬೇಗ ಪರಿಣಾಮಕ್ಕೆ ಒಳಗಾಗುತ್ತಾರೆ.ಅದರಿಂದ ಸರಕಾರದ ಮತ್ತು ಸಮಾಜದ ಕ್ರಿಯೆ ಅಥವ  ನಿಷ್ಕ್ರಿಯೆಯಿಂದ ಬೇರೆ ವಯೋಮಾನದವರಿಗಿಂತ  ಅವರು  ಹೆಚ್ಚಿನ ಪರಿಣಾಮಕ್ಕೆ ಒಳಗಾಗುತ್ತಾರೆ. ನಮ್ಮದೂ ಸೇರಿದಂತೆ ಅನೇಕ ಸಮಾಜಗಳಲ್ಲಿ ಮಕ್ಕಳು ತಾಯಿತಂದೆಯರ ಆಸ್ತಿ ಎಂಬ ಭಾವನೆ ಇದೆ ಅಥವ ಅವರು ಇನ್ನೂ ವಯಸ್ಕರಾಗಬೆಕಾದವರು, ಇಲ್ಲವೆ  ಸಮಾಜಕ್ಕೆ ಸದ್ಯಕ್ಕೆ ಯಾವುದೇ ಕೊಡುಗೆ   ನೀಡಲಾಗದವರು ಎಂಬ ಭಾವನೆ ಇದೆ. ಮಕ್ಕಳೂ ಸಹಾ ಅವರದ್ದೆ ಆದ  ಮನಸ್ಸಿರುವ, ತಮ್ಮದೆ ಅಭಿಪ್ರಾಯವಿರುವ, ಆಯ್ಕೆಯ ಸಾಮರ್ಥ್ಯವಿರುವ, ತೀರ್ಮಾನ ತೆಗೆದು ಕೊಳ್ಳುವ ಶಕ್ತಿ ಇರುವ ವ್ಯಕ್ತಿಗಳೆಂದು  ಪರಿಗಣಿಸುವುದಿಲ್ಲ. ವಯಸ್ಕರು ಅವರಿಗೆ ಮಾರ್ಗದರ್ಶನ ಮಾಡುವ ಬದಲು, ಅವರ ಜೀವನವನ್ನೇ ನಿರ್ಧರಿಸುವರು.ಮಕ್ಕಳಿಗೆ ಮತದಾನ ಮಾಡುವ ಹಕ್ಕಿಲ್ಲ,ಅಥವ ರಾಜಕೀಯ ಪ್ರಭಾವ ಇಲ್ಲ, ಆರ್ಥಿಕ ಸ್ವಾತಂತ್ರ ಇಲ್ಲ.  ಅನೇಕ ಬಾರಿ  ಅವರ  ದನಿಯನ್ನು ಕೇಳುವವರೆ ಇರುವುದಿಲ್ಲ. ಮಕ್ಕಳು ವಿಶೇಷವಾಗಿ ದುರ್ಬಳಕೆಗೆ, ಶೋಷಣೆಗೆ ಒಳಗಾಗುವ ಸ್ಥಿತಿಯಲ್ಲಿರುವರು.
ಮಕ್ಕಳ ಹಕ್ಕುಗಳು ಯಾವುವು ?

ಎಲ್ಲ ೧೮  ವರ್ಷದ ಒಳಗಿನ ವ್ಯಕ್ತಿಗಳು ಸರರ್ಕಾರದ ಆದೇಶದಲ್ಲಿ ಜಾರಿಮಾಡಿದ ಮತ್ತು ಅಂತರಾಷ್ಟ್ರೀಯ ಕಾಯಿದೆ ಪ್ರಕಾರ ಅನುಮೋದನೆ ಮಾಡಿದ ನಿಗದಿತ ಜೀವನ ಮಟ್ಟ ಮತ್ತು ಹಕ್ಕುಗಳನ್ನು ಹೊಂದಲು ಅರ್ಹತೆ ಪಡೆದಿರುವರು.ಭಾರತೀಯ  ಸಂವಿಧಾನ ಭಾರತೀಯ  ಸಂವಿಧಾನ ಎಲ್ಲ ಮಕ್ಕಳಿಗೆ ,ಕೆಲವು ಹಕ್ಕುಗಳನ್ನು ಪ್ರದಾನ ಮಾಡಿದೆ. ಕೆಲವನ್ನು ವಿಶೇಷವಾಗಿ ಅದರಲ್ಲಿ ಸೇರಿವೆ. ಅವು ಯಾವು ಅಂದರೆ:

    ಎಲ್ಲ ೬-೧೪ ವಯೋಮಾನದ ಮಕ್ಕಳು ಸಂವಿಧಾನದ  ( ಅನುಚ್ಛೇದ ೨೧ಎ) ಉಚಿತ ಕಡ್ಡಾಯ ಶಿಕ್ಷಣದ ಹಕ್ಕು ಇದೆ.
    ಯಾವುದೆ ಅಪಾಯಕಾರಿ ಕೆಲಸದಲ್ಲಿ  ೧೪ ವರ್ಷ ತುಂಬುವವರೆಗೆ ತೊಡಗುವುದರಿಂದ ರಕ್ಷಿತರಾಗುವ ಹಕ್ಕು ಇದೆ( ಅನುಚ್ಛೇದ ೨೪)
    ಆರ್ಥಿಕ ಕಾರಣಕ್ಖಾಗಿ ತಮ್ಮ ವಯಸ್ಸಿನ , ಸಾಮರ್ಥ್ಯಕ್ಕೆ ಅನುಗುಣವಲ್ಲದ ವೃತ್ತಿಯಲ್ಲಿ ತೊಡುಗುವುದನ್ನು ತಡೆಯುವ ರಕ್ಷಣೆ ಇದೆ     (ಅನುಚ್ಛೇದ ೩೯. ಇ)
    ಆರೋಗ್ಯಕರವಾಗಿ  ಸ್ವಾತಂತ್ರ ವಾತಾವರಣದಲ್ಲಿ ಅಭಿವೃದ್ಧಿಹೊಂದಲು ಸಮಾನ ಅವಕಾಶ ಮತ್ತು ಅನುಕೂಲ, ನೈತಿಕ ಮತ್ತು ಆರ್ಥಿಕ ಶೋಷಣೆ ಇಲ್ಲದ ಬಾಲ್ಯ ಮತ್ತು ಯೌವ್ವನದ ಖಚಿತ ರಕ್ಷಣೆಯ ಹಕ್ಕು ಇದೆ(ಅನುಚ್ಛೇದ೩೯ ಎಫ್)

ಇವಲ್ಲದೆ ಅವರಿಗೆ ಭಾರತೀಯ ಪೌರರಾಗಿ ಯಾವದೇ ಪುರುಷ ಮತ್ತು ಮಹಿಳೆಯರಿಗೆ ಇರುವ  ಸಮಾನ ಹಕ್ಕುಗಳಿವೆ.

    ಸಮಾನತೆಯ ಹಕ್ಕು (ಅನುಚ್ಛೇದ-೧೪)
    ತಾರತಮ್ಯದ ವಿರುದ್ಧದ ಹಕ್ಕು(ಅನುಚ್ಛೇದ೧೫)
    ಕಾನೂನಿನ ಅಡಿಯಲ್ಲಿ ವೈಯುಕ್ತಿಕ ಸ್ವಾತಂತ್ರ್ಯ  (ಅನುಚ್ಛೇದ ೨೧)
    ಜೀತದಾಳಾಗಲು ಸಾಗಣಿಕೆ ಮತ್ತು ಬಲವಂತದ ವಿರುದ್ಧ ರಕ್ಷಣೆಯ ಸ್ವಾತಂತ್ರ್ಯ (ಅನುಚ್ಛೇದ ೨೩)
    ಸಾಮಾಜಿಕ ಅನ್ಯಾಯ ಮತ್ತು ಎಲ್ಲ ರೀತಿಯ ಶೋಷಣೆಯಿಂದ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ (ಅನುಚ್ಛೇದ ೪೬)

ಅಲ್ಲದೆ ರಾಜ್ಯವು:

    ಮಕ್ಕಳಿಗೆ ಮಹಿಳೆಯರಿಗೆ ವಿಶೇಷ ವ್ಯವಸ್ಥೆಯನ್ನು ಮಾಡಬೇಕು (ಅನುಚ್ಛೇದ ೧೫-೩)
    ಅಲ್ಪಸಂಖ್ಯಾತರ ಹಿತ ರಕ್ಷಣೆ ಮಾಡಬೇಕು. (ಅನುಚ್ಛೇದ ೨೯)
    ದುರ್ಬಲ ವರ್ಗದ ಜನರ ಶೈಕ್ಷಣಿಕ ಅಗತ್ಯವನ್ನು ಉತ್ತೇಜಿಸಬೇಕು. (ಅನುಚ್ಛೇದ ೪೬)
    ಜನರ ಆಹಾರದ  ಪೌಷ್ಟಿಕತೆಯ ಮಟ್ಟ ಮತ್ತು ಜೀವನ ಮಟ್ಟ, ಸಾರ್ವಜನಿಕ ಆರೋಗ್ಯವನ್ನು ಹೆಚ್ಚಿಸಬೇಕು(ಅನುಚ್ಛೇದ ೪೭)

ಸಂವಿಧಾನ ಮಾತ್ರವಲ್ಲದೆ, ಮಕ್ಕಳಿಗಾಗಿ ವಿಶೆಷ ಕಾಯಿದೆಗಳಿವೆ. ಜವಾಬ್ದಾರಿಯುತ ಶಿಕ್ಷಕರು ಮತ್ತು ನಾಗರೀಕರಾಗಿ ನಾವು ಅವುಗಳನ್ನು  ಮತ್ತು ಅವುಗಳ ಪ್ರಾಮುಖ್ಯತೆಯನ್ನು ಅರಿತಿರುವುದು ಅತಿ ಮುಖ್ಯ. ಅವುಗನ್ನು ಈ ಕೈಪಿಡಿಯ ವಿವಿಧ ಭಾಗಗಳಲ್ಲಿ ಅವುಗಳಿಗೆ ಸಂಬಂಧಿಸಿದ ವಿಷಯಗಳೊಡನೆ ನೀಡಲಾಗಿದೆ. ವಿಶ್ವಸಂಸ್ಥೆಯ  ಮಕ್ಕಳ ಹಕ್ಕುಗಳ ಬಗೆಗಿನ ಸಮಾವೇಶದಲ್ಲಿ ಎಲ್ಲಕ್ಕಿಂತ ಅತಿ ಪ್ರಾಮುಖ್ಯವಾದ ಅಂತರಾಷ್ಟ್ರೀಯ ಕಾನೂನು ಎಂದರೆ ಮಕ್ಕಳ ಹಕ್ಕುಗಳ ಬಗೆಗಿನ ಸಮಾವೇಶದಲ್ಲಿ ತಗೆದು ಕೊಂಡದ್ದಾಗಿದೆ. ಅದು ಮಕ್ಕಳ ಹಕ್ಕುಗಳ ಸಮಾವೇಶ CRC  ಎಂದೆ ಜನಪ್ರಿಯವಾಗಿದೆ. ಇದು, ನಮ್ಮ ಸಂವಿಧಾನ ಮತ್ತು ಇತರ ಕಾಯಿದೆಗಳು ಎಲ್ಲ ಮಕ್ಕಳು ಹೊಂದಿರಬೇಕಾದ  ಹಕ್ಕುಗಳನ್ನು  ಕೊಡಮಾಡುತ್ತವೆ. ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶ ಎಂದರೇನು? ಮಾನವ ಹಕ್ಕುಗಳು ಎಲ್ಲರಿಗೂ ಇವೆ.    ಅವರ ವಯಸ್ಸು ಗಣನೆಗೆ ಬರುವುದಿಲ್ಲ.   ಮಕ್ಕಳು ಕೂಡಾ  ಅದರಲ್ಲಿ ಬರುವರು.   ಆದಾಗ್ಯೂ     ಅವರ ವಿಶೇಷ ಸ್ಥಾನದ ಫಲವಾಗಿ  ಅವರಿಗೆ  ಹಿರಿಯರಿಗಿಂತ  ಹೆಚ್ಚುವರಿಯಾದ ರಕ್ಷಣೆ ಮತ್ತು ಮಾರ್ಗದರ್ಶನ ಅಗತ್ಯ.  ಮಕ್ಕಳು     ತಮ್ಮದೆ ಆದ ವಿಶೇಷ ಹಕ್ಕುಗಳನ್ನು ಹೊಂದಿರುವರು.  ಅವುಗಳನ್ನು ಮಕ್ಕಳ ಹಕ್ಕು ಎನ್ನುವರು. ಇವುಗಳನ್ನು ಅಂತರಾಷ್ಟ್ರೀಯ ಸಂಸ್ಥೆಯ  (CRC) UN  ಮಕ್ಕಳ ಹಕ್ಕಿನ   ಸಮಾವೇಶದಲ್ಲಿ  ಮಂಡಿಸಲಾಗಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕಿನ  ಸಮಾವೇಶದಲ್ಲಿ(CRC)ದಲ್ಲಿ ಅತಿ ಮುಖ್ಯ ಅಂಶಗಳೆಂದರೆ :

    ಹುಡುಗರು ಮತ್ತು  ಹುಡುಗಿಯರ ವಯಸ್ಸು ೧೮ ವರ್ಷದ  ಕೆಳಗೆ ಇದ್ದು, ಅವರಿಗೆ ಮದುವೆಯಾಗಿ ಮಕ್ಕಳಾಗಿದ್ದರೂ  ಸಹಾ ಅವರು ಮಕ್ಕಳಾಗಿ ಪರಿಗಣಿಸ್ಪಡುತ್ತಾರೆ. ಇದು ಇಬ್ಬರಿಗೂ  ಸಮಾನವಾಗಿ ಅನ್ವಯವಾಗವುದು.
    ಸಮಾವೇಶವು   ಮಗುವಿನ ಹಿತಾಸಕ್ತಿ  ,ತಾರತಮ್ಯ ರಾಹಿತ್ಯ  ,  ಮತ್ತು  ಮಗುವಿನ ಅಭಿಪ್ರಾಯಕ್ಕೆ ಗೌರವ ದ ತತ್ವದ                      ಮೇಲೆ ಕೆಲಸ ಮಾಡುವುದು.
    ಅದು ಕುಟುಂಬದ ಪ್ರಾಮುಖ್ಯತೆಗೆ ಒತ್ತುಕೊಡುವುದು. ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ವಾತಾವರಣದ ನಿರ್ಮಾಣದತ್ತ ಗಮನ ಹರಿಸುವುದು.

ಮಕ್ಕಳಿಗೆ ಸಮಾಜದಲ್ಲಿ ಸಮಾನ ಮತ್ತು ಉತ್ತಮ ಸ್ಥಾನ  ದೊರಕಿಸುವ ಹೊಣೆಯನ್ನು ರಾಜ್ಯ ಗೌರವಿಸಬೇಕು ಮತ್ತು ಖಚಿತ ಪಡಿಸಬೇಕು

    ಅದು ನಾಲ್ಕು ವಿಧದ ಹಕ್ಕುಗಳು ಬಗ್ಗೆ ಗಮನ ಸೆಳೆಯುತ್ತದೆ - ನಾಗರೀಕ, ಸಮಾಜಿಕ,ರಾಜಕೀಯ ಮತ್ತು ಸಾಂಸ್ಕೃತಿಕ
    ಬದುಕು
    ರಕ್ಷಣೆ
    ಅಭಿವೃದ್ಧಿ
    ಪಾಲುಗೊಳ್ಳುವಿಕೆ

ಬದುಕುವ ಹಕ್ಕಿನಲ್ಲಿ ಕೆಳಗಿನವುಗಳು ಸೇರಿವ

    ಬದುಕುವ ಹಕ್ಕು
    ಅತ್ಯುತ್ತಮ ಮಟ್ಟದ ಆರೋಗ್ಯವನ್ನು ಹೊಂದುವುದು
    ಪೌಷ್ಟಿಕತೆ
    ಉತ್ತಮ ಮಟ್ಟದ ಜೀವನ ಶೈಲಿ
    ಹೆಸರು ಮತ್ತು ರಾಷ್ಟ್ರಿಯತೆ

ಅಭಿವೃದ್ಧಿ ಯ ಹಕ್ಕು ಈ ಕೆಳಗಿನವುಗಳನ್ನು ಒಳಗೊಂಡಿದೆ

    ಶಿಕ್ಷಣ
    ಬಾಲ್ಯದಲ್ಲಿ ಆರೈಕೆ ಮತ್ತು ಅಭಿವೃದ್ಧಿಗೆ ಸಹಾಯ
    ಸಾಮಾಜಿಕ ಭದ್ರತೆ
    ಬಿಡುವು,ಮನರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಹಕ್ಕು

ರಕ್ಷಣೆಯ ಹಕ್ಕು ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು  ಒದಗಿಸುತ್ತಾ ಕೆಳಗಿನವುಗಳಿಂದ ರಕ್ಷಿಸುತ್ತದೆ

    ಶೋಷಣೆ
    ದುರ್ಬಳಕೆ
    ಅಮಾನವೀಯ ಮತ್ತು ಅಪಮಾನಕಾರಿಯಾಗಿ ನೆಡೆಸಿಕೊಳ್ಳುವುದು
    ನಿರ್ಲಕ್ಷ್ಯ
    ವಿಶೇಷ ಸಂದರ್ಭಗಳಾದ ತುರ್ತುಪರಿಸ್ಥಿತಿ, ಸೈನಿಕ ಸಂಘರ್ಷ,ಅಸ್ಥಿರತೆ ವಿರುದ್ಧ  ವಿಶೇಷ ರಕ್ಷಣೆ  ಒದಗಿಸುವದನ್ನು ಒಳಗೊಂಡಿದೆ

ಭಾಗವಹಿಸುವಿಕೆಯು ಕೆಳಗಿನವುಗಳನ್ನು ಒಳಗೊಂಡಿರಬೇಕು.

    ಮಗುವಿನ ಅಭಿಪ್ರಾಯಕ್ಕೆ ಮನ್ನಣೆ
    ಅಭಿವ್ಯಕ್ತಿ ಸ್ವಾತಂತ್ರ್ಯ
    ಸೂಕ್ತವಾದ ಮಾಹಿತಿ ಪಡೆಯುವುದು,ಆಲೋಚನೆ, ಆತ್ಮ ಸಾಕ್ಷಿ ಮತ್ತು  ಧರ್ಮದ ಸ್ವಾತಂತ್ರ್ಯ.

ಈ ಎಲ್ಲಾ ಹಕ್ಕುಗಳು ಪರಸ್ಪರ ಅವಲಂಬಿತವಾಗಿ ,ಬೇರ್ಪಡಿಸಲಾರದಂತಿವೆ ಅವುಗಳ ಗುಣಕ್ಕೆ ಅನುಗುಣವಾಗಿ ಎಲ್ಲ ಹಕ್ಕುಗಳನ್ನು ಹೀಗೆ ವಿಂಗಡಿಸಲಾಗಿದೆ

    ತತಕ್ಷಣದ ಹಕ್ಕುಗಳಲ್ಲಿ (ನಾಗರೀಕ ಮತ್ತು ರಾಜಕೀಯ) ತಾರತಮ್ಯ,   ಶಿಕ್ಷೆ , ಕ್ರಿಮಿನಲ್ ಮೊಕದ್ದಮೆಗಳಲ್ಲಿ ಉತ್ತಮ ಮಂಡನೆಯ ಅವಕಾಶ ಮತ್ತು ಬಾಲಾಪರಾಧಿಗಳಿಗೆ ಪ್ರತ್ಯೇಕ ನ್ಯಾಯ ವ್ಯವಸ್ಥೆ, ಬದುಕುವ ಹಕ್ಕು, ಕುಟುಂಬದ ಜೊತೆ ಪುನರ್ ಮಿಲನದ ಹಕ್ಕು ಸೇರಿವೆ.ಬಹಳಷ್ಟು ರಕ್ಷಣೆಯ ಹಕ್ಕುಗಳು ತತಕ್ಷಣದ ಹಕ್ಕುಗಳ ಅಡಿಯಲ್ಲಿಯೇ ಬರುವವು.ಆದ್ದರಿಂದ ತಕ್ಷಣದ ಗಮನ ಮತ್ತು ಮಧ್ಯವರ್ತನೆ ಅಗತ್ಯ.
    ಪ್ರಗತಿ ಪರ ಹಕ್ಕುಗಳಲ್ಲಿ ( ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು) ಆರೋಗ್ಯ, ಶಿಕ್ಷಣ ಮತ್ತು ಮೊದಲು ತಿಳಿಸಿದ ಗುಂಪಿನಲ್ಲಿ ಇಲ್ಲದಿರುವ ಹಕ್ಕುಗಳು ಸೇರಿವೆ ಅವೆಲ್ಲವನ್ನೂ  CRC  ಅನುಚ್ಛೇದ  ೪ ರಲ್ಲಿ ಗುರುತಿಸಲಾಗಿದೆ. ಇದರ ವ್ಯಾಖ್ಯಾನ ಹೀಗಿದೆ “ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳಿಗೆ  ಸಂಬಂಧಿಸಿದಂತೆ, ರಾಷ್ಟ್ರವು ತನಗೆ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಸಾಧ್ಯವಾದರೆ ಅಂತರಾಷ್ಟ್ರೀಯ ಸಹಕಾರದ ಚೌಕಟ್ಟಿನಲ್ಲಿ ಗರಿಷ್ಟ ಕ್ರಮ ತೆಗೆದುಕೊಳ್ಳ ಬೇಕು.”

ಈ  ಕೈಪಿಡಿಯಲ್ಲಿ ವಿಶೇಷವಾಗಿ ಮಕ್ಕಳ ರಕ್ಷಣೆ,  ಅದನ್ನು ಖಾತರಿಯಾಗಿ ಒದಗಿಸುವಲ್ಲಿ  ಶಿಕ್ಷಕರ ಮತ್ತು ಶಾಲೆಯ ಪಾತ್ರದ ಬಗ್ಗೆ ವಿವರಣೆ ನೀಡಲಾಗಿದೆ .

೯ ಗಮನಿಕೆ: ಮಕ್ಕಳು ಬೆಳೆದಂತೆ ವಿಭಿನ್ನ ಸಾಮರ್ಥ್ಯ ಮತ್ತು   ಪರಿಪಕ್ವತೆಯನ್ನು ಪಡೆಯುತ್ತಾರೆ.  ಇದರ ಅರ್ಥ ಅವರು ೧೫ ಅಥವ ೧೬ ವರ್ಷದವರಾದಾಗ ರಕ್ಷಣೆಯ ಅಗತ್ಯವಿಲ್ಲ ಎಂದಲ್ಲ.  ಉದಾಹರಣೆಗೆ-ನಮ್ಮ ದೇಶದಲ್ಲಿ ಮಕ್ಕಳಿಗೆ ೧೬ ವರ್ಷ ತುಂಬುವ ಮೊದಲೇ ಮದುವೆ ಮಾಡುವರು ಮತ್ತು ಕೆಲಸಕ್ಕೂ ಹಚ್ಚುವರು ಆದರೆ ಅವರಿಗೆ ಅದರಿಂದ  ರಕ್ಷಣೆ ಕಡಿಮೆ ಆಗಬಾರದು.  ಸಮುದಾಯವು ಅವರನ್ನು  ವಯಸ್ಕರೆಂದು,ಪಕ್ವತೆ ಇರುವವರೆಂದು ಪರಿಗಣಿಸಿದರೂ ಅವರಿಗೆ ಅತ್ಯುತ್ತಮ ರಕ್ಷಣೆ ಮತ್ತು ಸಹಾಯ  ದೊರೆಯಲೇಬೇಕು. ಅದರಿಂದ ಅವರು ಜೀವನದ ಹಾದಿಯಲ್ಲಿ  ಪ್ರೌಢತೆಯತ್ತ ಸಾಗುವಾಗ ಉತ್ತಮ ಆರಂಭ ಸಿಗುವುದು.
_________________________________

***ರಕ್ಷಣೆಯ ಹಕ್ಕು ****

ರಕ್ಷಣೆಯ ಹಕ್ಕು

ರಕ್ಷಣೆ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ನೀವು ಶಿಕ್ಷಕರಾಗಿ ನಿಮ್ಮ ವಶದಲ್ಲಿನ ಎಲ್ಲ ಮಕ್ಕಳಿಗೂ ರಕ್ಷಣೆಯ ಖಾತ್ರಿ ದೊರಕಿಸಬೇಕು.
ಕಲ್ಪನೆ ಮತ್ತು ಸತ್ಯಾಂಶ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಎಲ್ಲ ವರ್ಗದ ಹೆಣ್ಣು ಮಕ್ಕಳು ಹೆಚ್ಚು ಅಸಾಹಾಯಕ.ಮಕ್ಕಳ ಶೋಷಣೆ ಮತ್ತು ದುರ್ಬಳಕೆಯ ಬಗೆಗಿನ ಕೆಲವುಮಿಥ್ಯೆಗಳು ಹೀಗಿವೆ
ಅಂಶಗಳು [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    3 ಮಗುವಿನ ರಕ್ಷಣೆಯ ವಿಷಯ ಮತ್ತು ಪ್ರತಿಯೊಬ್ಬ ಶಿಕ್ಷಕರು ತಿಳಿಯಬೇಕಿರುವ ಅಂಶಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಲಿಂಗತಾರತಮ್ಯ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಲಿಂಗತಾರತಮ್ಯದ ಮಿಥ್ಯೆ ಮತ್ತು ವಾಸ್ತವದ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಬಾಲ್ಯವಿವಾಹ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಕಾನೂನು ಬದ್ಧ ಮದುವೆ ಎಂದು ಹರೆಯದ ಹೆಣ್ಣನ್ನು ಇಲ್ಲಿನ ಅಥವ ಮಧ್ಯಪ್ರಾಚ್ಯದ ಮುದಿವಯಸ್ಸಿನ ಗಂಡಿನ ಜೊತೆ ಮದುವೆ ಮಾಡಿ, ವಂಚಿಸುವರು
ಬಾಲ ಕಾರ್ಮಿಕತೆ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಬಾಲ ಕಾರ್ಮಿಕತೆಯ-ಮಿಥ್ಯಗಳು ಮತ್ತು ಸತ್ಯಗಳ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.
ಲೈಂಗಿಕ ದುರ್ಬಳಕೆ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಮಗುವಿನ ಲೈಂಗಿಕ ದುರ್ಬಳಕೆಯಾ ಕುರಿತಾದ ಮಿಥ್ಯೆ ಮತ್ತು ಸತ್ಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಶಾರೀರಿಕ ಶಿಕ್ಷೆ [ಪುಟಗಳನ್ನು ಹೊಂದಿರುವ ಫೋಲ್ಡರ್ ತೆರೆಯುತ್ತದೆ]
    ಶಾರೀರಿಕ ಶಿಕ್ಷೆಯನ್ನು ಮಗುವಿಗೆ ದೈಹಿಕ ಬಲ ಉಪಯೋಗಿಸಿ ನೋವು ಕೊಟ್ಟು ಗಾಯ ಮಾಡದೆ , ತಪ್ಪು ತಿದ್ದುವ ಶಿಕ್ಷೆ ಎಂದು ನಿರೂಪಿಸುವರು
ಪರೀಕ್ಷಾ ಒತ್ತಡ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಭಾರತದ ಶಿಕ್ಷಣ ಪದ್ದತಿಯು ಹೊರತರುತ್ತಿರುವ ಜಾಣರನ್ನು ನೋಡಿ ವಿಶ್ವವು ವಿಸ್ಮಯಗೊಂಡಿದೆ.
ಬೀದಿ ಮತ್ತು ಓಡಿ ಬಂದ ಮಕ್ಕಳು [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಬಡ ಕುಟುಂಬದ ಮಕ್ಕಳು ಮಾತ್ರ ಮನೆಯಿಂದ ಓಡಿಹೋಗಿ ಬೀದಿ ಮಕ್ಕಳಾಗುವರು

____________________________________________


****ರಕ್ಷಣೆ ಮತ್ತು ಕಾನೂನು *****
ರಕ್ಷಣೆ ಮತ್ತು ಕಾನೂನು

ಸಾಮಾಜಿಕ ನ್ಯಾಯ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಮಕ್ಕಳಿಗೆ ಎಲ್ಲ ಶೋಷಣೆಯ ಮತ್ತು ತೊಂದರೆಯಾಗುವ ಪರಿಸ್ಥಿತಿಯಿಂದ ರಕ್ಷಣೆ ಪಡೆವ ಹಕ್ಕು ಇದೆ. ಶಿಕ್ಷಕರಾಗಿ ನೀವು ಇವುಗಳನ್ನು ನಿಭಾಯಿಸಲು ತಿಳಿದಿರಬೇಕು.
ಕ್ರಮಗಳು [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ನೀವು ಕಾನೂನಿನ ಪ್ರಕ್ರಿಯಗೆ ಪೂರಕವಾಗಲು ಕೆಳಗಿನ ಕ್ರಮಗಳನ್ನು ತೆದು ಕೊಳ್ಳ ಬಹುದು
ಲಿಂಗ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಲಿಂಗ -ಆಯ್ಕೆಯ ಗರ್ಭ ಪಾತ, ಹೆಣ್ಣು ಭ್ರೂಣ ಹತ್ಯೆ ಮತ್ತು ಶಿಶು ಹತ್ಯೆ
ಬಾಲ್ಯ ವಿವಾಹ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಬಾಲ್ಯವಿವಾಹ ತಡೆ ಕಾಯಿದೆ, 1929 ರ ಪ್ರಕಾರ ಬಾಲ್ಯ ಎಂದರೆಗಂಡಿಗೆ 21 ವರ್ಷ ವಯಸ್ಸು ಹೆಣ್ಣಮಗುವಿಗೆ ೧೮ ವರ್ಷ ಗಳಿಗಿಂತ ಕಡಮೆ ವಯಸ್ಸು (ಪ್ರಕರಣ 2(a)).
ಬಾಲ ಕಾರ್ಮಿಕರು [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಚಿಲ್ಡರ್ನ ( ಪ್ಲಡ್ಜಿಂಗ್ ಅಫ್ ಲೇಬರ್) ಆಕ್ಟ , 1933 ಪ್ರಕಾರ ತಾಯಿತಂದೆ ಇಲ್ಲವೆ ಪೋಷಕರು ೧೫ ವರ್ಷ ಕೆಳಗಿನ ಮಗುವನ್ನು ಸಂಬಳಕ್ಕೆ ಅಥವ ಲಾಭಕ್ಕಾಗಿ ಕೆಲಸಕ್ಕೆ ಕಳುಹಿಸಿದರೆ, ವೇತನವು ಸೂಕ್ತವಾಗಿರದಿದ್ದರೆ ಮಾಡಿಕೊಳ್ಳುವ ಒಪ್ಪಂದವು ರದ್ದಾಗುವುದು.
ಮಕ್ಕಳ ಸಾಗಣೆ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಮಕ್ಕಳ ಸಾಗಣಿಕೆಯನ್ನು ತಡೆಯಲು ಕಾನೂನುಗಳು ಇವೆ
ಹೆಚ್ ಐವಿ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಹೆಚ್ ಐವಿ ಸೊಂಕಿತ (ಪಾಸಿಟಿವ್) ಜನರ ಹಕ್ಕುಗಳನ್ನು ರಕ್ಷಿಸುವ ಕಾಯಿದೆಯು ಈಗ ತಯಾರಿಯ ಹಂತದಲ್ಲದೆ.
ಶಾರೀರಿಕ ಶಿಕ್ಷೆ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಶಾಲೆಗಳಲ್ಲಿ ಶಾರೀರಿಕ ಶಿಕ್ಷೆಯನ್ನು ನಿಷೇದಿಸಿ ಯಾವದೆ ಶಾಸನ ಇಲ್ಲ. ಆದರೆ ವಿವಿಧ ರಾಜ್ಯಗಳು ನಿಷೇಧಿಸಿ ಕಾಯಿದೆ ಅಥವ ನೀತಿಯ ನ್ನು ಜಾರಿಗೆ ತಂದಿವೆ.
ಗೃಹ ಕ್ರೌರ್ಯ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಗೃಹ ಕ್ರೌರ್ಯದ ಬಗ್ಗೆ ದೇಶದಲ್ಲಿ ಯಾವುದೆ ಕಾನೂನು ಇಲ್ಲ.
ಜಾತಿ ತಾರತಮ್ಯ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಭಾರತೀಯ ಸಂವಿಧಾನವು ನೀಡುವ ಖಾತ್ರಿ

__________________________________________
***ಶಿಕ್ಷಕರಿಗೆ ಕಿವಿಮಾತು *****


ಮೂಲನೆಲೆ / ಶಿಕ್ಷಣ / ಮಕ್ಕಳ ಹಕ್ಕುಗಳು / ಶಿಕ್ಷಕರಿಗೆ ಕಿವಿಮಾತು

ಹಂಚಿಕೊಳ್ಳಿ
ನೋಟಗಳು

    ನೋಟ

    ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಶಿಕ್ಷಕರಿಗೆ ಕಿವಿಮಾತು

ಮುನ್ನುಡಿ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಮಕ್ಕಳನ್ನು ರಕ್ಷಿಸಲು ಶಿಕ್ಷಕರು ಏನು ಮಾಡಬಹುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಸ್ನೇಹಿ ಶಿಕ್ಷಕ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಮಕ್ಕಳ ಹಕ್ಕುಗಳನ್ನು, ಮಾನವ ಹಕ್ಕು ಎಂದು ಅರ್ಥಮಾಡಿಕೊಳ್ಳಿ. ಸಮೂದಾಯದಲ್ಲೂ ಅದೆ ಭಾವನೆ ಬೆಳಸಿ
ಹೆಚ್. ಐ. ವಿ ಮಗು [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಹೆಚ್. ಐ. ವಿ (HIV) ಸೊಂಕಿತ ಅಥವ ಪೀಡಿತ ಮಗುವಿನ ಹಕ್ಕುಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಮಾನವತೆ ಗೌರವ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಮಕ್ಕಳಲ್ಲಿನ ಮಾನವತೆಯ ಗೌರವವನ್ನು ಉತ್ತೇಜಿಸುವ ರಚನಾತ್ಮಕ ಶಿಸ್ತಿನ ಅಭ್ಯಾಸಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಶಾಲಾ ವಾತಾವರಣ [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ನಿಮ್ಮ ಶಾಲೆಯು ಮಗು ಸ್ನೇಹಿಯೆ? ಹಾಗಾಗಲು ಇರುವ ವಿಧಾನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಮನರಂಜನಾ ಚಟುವಟಿಕೆಗಳು [ಮಾಹಿತಿಯನ್ನು ಹೊಂದಿರುವ ಪುಟ ತೆರೆಯುತ್ತದೆ]
    ಮಕ್ಕಳು ತೊಡಗಬಹುದಾದ ವಿಷಯ ಆಧಾರಿತ ಮನರಂಜನಾಚಟುವಟಿಕೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.


__________________________________________

***ದೂರು ನೀಡುವ ವಿಧಾನ ****


ದೂರು ನೀಡುವ ವಿಧಾನ

ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುವ ಗುರುತರ ಪ್ರಕರಣಗಳನ್ನು ಪ್ರಜ್ನಾಪೂರ್ವಕವಾಗಿ ಸ್ವಯಂಪ್ರೇರಿತವಾಗಿ ಆಯೋಗವು ಗುರುತಿಸಬೇಕು ಅಲ್ಲದೇ ಮಕ್ಕಳು ಹಕ್ಕುಗಳನ್ನು ಅನುಭವಿಸಲು ತಡೆಯೊಡ್ಡುವ ಅಂಶಗಳನ್ನು ಪರಿಶೀಲಿಸಬೇಕು

    ಸಂವಿಧಾನದ 8 ನೇ ಅನುಸೂಚಿಯಲ್ಲಿನ ಯಾವುದೇ ಭಾಷೆಯಲ್ಲಿ ಆಯೋಗಕ್ಕೆ ದೂರು ನೀಡಬಹುದು
    ಅಂತಹ ದೂರುಗಳನ್ನು ನೀಡಲು ಯಾವುದೇ ಶುಲ್ಕ ನೀಡಬೇಕಾಗಿಲ್ಲ
    ದೂರಿಗೆ ಕಾರಣವಾದ ವಿಷಯದ ಸಂಪೂರ್ಣ ಚಿತ್ರವನ್ನು ದೂರಿನಲ್ಲಿ ನೀಡಬೇಕು
    ಅಗತ್ಯವೆನಿಸಿದಲ್ಲಿ ಆಯೋಗವು ಹೆಚ್ಚಿನ ವಿವರಗಳನ್ನು / ಶಪಥ ಪತ್ರಗಳನ್ನು ಆಯೋಗ ಕೇಳಬಹುದು
    ದೂರು ನೀಡುವಾಗ ಇವುಗಳನ್ನು ದಯವಿಟ್ಟು ಖಾತ್ರಿ ಮಾಡಿಕೊಳ್ಳಿರಿ
    ಸ್ಪಷ್ಟ ಮತ್ತು ಓದಲಾಗುವಂತಿರಬೇಕು, ಅಸ್ಪಷ್ಟವಾಗಿರಬಾರದು. ಅನಾಮಧೇಯ ಅಥವಾ ಬೇನಾಮಿ ದೂರು ಆಗಿರಬಾರದು
    ಇಂತಹ ದೂರುಗಳನ್ನು ನೀಡಲು ಯಾವುದೇ ಶುಲ್ಕ ವಿಧಿಸುವಂತಿಲ್ಲ
    ಕೈಗೆತ್ತಿಕೊಂಡ ಪ್ರಕರಣವು ಆಸ್ತಿಯ ಹಕ್ಕುಗಳು, ಗುತ್ತಿಗೆಗೆ ಸಂಬಂಧಿಸಿದ ಭಾಧ್ಯತೆಗಳಂತಹ ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿರಬಾರದು.
    ಕೈಗೆತ್ತಿಕೊಂಡ ಪ್ರಕರಣವು ಸೇವಾವಿಷಯಗಳಿಗೆ ಸಂಬಂಧಿಸಿರಬಾರದು
    ಪ್ರಕರಣವು ಕಾನೂನಿಗೆ ಅನ್ವಯವಾಗಿ ರಚಿಸಲ್ಪಟ್ಟ ಬೇರೇ ಯಾವುದೇ ಆಯೋಗದ ಮುಂದೆ ಇರಬಾರದು ಅಥವಾ ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣದಲ್ಲಿ ವಿಚಾರಣಾಧೀನವಾಗಿರಬಾರದು
    ಪ್ರಕರಣವು ಇದೇ ಆಯೋಗದಿಂದ ಈ ಮೊದಲೇ ತೀರ್ಮಾನಿಸಿದುದಾಗಿರಬಾರದು
    ಬೇರೆ ಯಾವುದೇ ಆಧಾರದಲ್ಲಿ ಆಯೋಗದ ವ್ಯಾಪ್ತಿಯಿಂದ ಆಚೆ ಇರಬಾರದು

ಸಂಪರ್ಕಿಸಬೇಕಾದವರ ವಿವರಗಳು

ಹೆಸರು ಮತ್ತು ಪದನಾಮ


ಸಂಪರ್ಕ ಸಂಖ್ಯೆ


ಇ-ಮೇಲ್ ವಿಳಾಸ

ಶ್ರೀಮತಿ ಶಾಂತಾ ಸಿನ್ಹಾ, ಅಧ್ಯಕ್ಷರು


23731583, 23731584


Shantha.sinha@nic.in

ಶ್ರೀಮತಿ ಸಂಧ್ಯಾ ಬಜಾಜ್, ಸದಸ್ಯರು


23724021


Sandhya.bajab@nic.in

ಶ್ರೀಮತಿ. ದೀಪಾ ದೀಕ್ಷಿತ್, ಸದಸ್ಯರು


23724022


Dixit.dipa@rediffmail.com

ಶ್ರೀ. ತೆವಾರಿ, ಸದಸ್ಯ ಕಾರ್ಯದರ್ಶಿ


23724020


ms.ncpcr@nic.in

ಯೇ ಪಿ ಬಿ ಎಕ್ಷ್


23724027


 ___________________________________________
***ಮಕ್ಕಳ ಹಕ್ಕುಗಳ ಮಸೂದೆ ****

ಮಕ್ಕಳ ಹಕ್ಕುಗಳ ಮಸೂದೆ

ಹದಿನೆಂಟು ವಯೋಮಾನದ ಕೆಳಗಿನ ಪ್ರತೀ ವ್ಯಕ್ತಿಯೂ ಮಗು. ಮಗುವಿನ ಪಾಲನೆ ಹಾಗೂ ಪೋಷಣೆ ತಂದೆ ತಾಯಿಯರ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ದೇಶವು ಮಗುವಿನ ಹಕ್ಕುಗಳನ್ನು ಗೌರವಿಸುವುದಲ್ಲದೆ ಸಂರಕ್ಷಿಸಲೇ ಬೇಕು.
ಘನತೆ ಮತ್ತು ಅಭಿವ್ಯಕ್ತಿ

    ನನ್ನ ಹಕ್ಕುಗಳ ಬಗ್ಗೆ ತಿಳಿಯಲು ನನಗೆ ಹಕ್ಕಿದೆ (ಅಧಿನಿಯಮ 42)
    ನಾನು ಯಾರಾದರಾಗಿರಲಿ, ಎಲ್ಲೇ ಜೀವಿಸುತ್ತಲಿರಲಿ, ನನ್ನ ತಂದೆ ತಾಯಿ ಯಾರೇ ಆಗಲಿ, ನಾನು ಯಾವುದೇ ಭಾಷೆಯವನಾಗಿರಲಿ, ನಾನು ಯಾವ ಧರ್ಮಕ್ಕಾದರೂ ಸೇರಿದವನಾಗಿರಲೀ, ನಾ ಒಬ್ಬ ಹುಡುಗನಾಗಲೀ, ಹುಡುಗಿಯಾಗಲೀ, ಯಾವುದೇ ಸಂಸ್ಕೃತಿಗೆ ಸೇರಿರಲಿ, ನಾನು ವಿಕಲಚೇತನನಾಗಿರಲೀ, ನಾನು ಶ್ರೀಮಂತನಾಗಲೀ, ಬಡವನಾಗಲೀ, ಮಗುವಾಗಿ ನನಗೆ ಹಕ್ಕುಗಳಿವೆ.
    ಯಾವುದೇ ಕಾರಣದಿಂದಲೂ ನನ್ನನ್ನು ಅನುಚಿತವಾಗಿ ನಡೆಸಿಕೊಳ್ಳಬಾರದು. ಎಲ್ಲರಿಗೂ ಇದನ್ನು ತಿಳಿದಿರುವ ಜವಾಬ್ದಾರಿ ಇದೆ (ಅಧಿನಿಯಮ 2)
    ನನ್ನ ಅಭಿಪ್ರಾಯವನ್ನು ಮುಕ್ತವಾಗಿ ಹೇಳುವ ಹಕ್ಕು ನನಗಿದೆ ಮತ್ತು ಅದನ್ನು ಗುರುತರವಾಗಿ ತೆಗೆದುಕೊಳ್ಳಬೇಕು ಮತ್ತು ಎಲ್ಲರಿಗೂ ಇತರರು ಹೇಳುವುದನ್ನು ಆಲಿಸುವ ಹೊಣೆಗಾರಿಕೆಯಿದೆ (ಅಧಿನಿಯಮ 12, 13)
    ನನಗೆ ತಪ್ಪು ಮಾಡುವ ಹಕ್ಕು ಇದೆ ಮತ್ತು ನಮ್ಮ ತಪ್ಪಿನಿಂದಾಗಿ ನಾವು ಕಲಿಯುತ್ತೇವೆ ಎಂದು ಒಪ್ಪಿಕೊಳ್ಳುವ ಹೊಣೆಗಾರಿಕೆ ಎಲ್ಲರಿಗೂ ಇದೆ.
    ನನ್ನ ಸಾಮರ್ಥ್ಯಗಳೇನೇ ಇದ್ದರೂ, ನಾನು ಎಲ್ಲರೊಂದಿಗೆ ಸೇರಿಕೊಳ್ಳುವ ಹಕ್ಕು ನನಗಿದೆ ಮತ್ತು ಇತರರನ್ನು ಅವರ ಭಿನ್ನತೆಗಾಗಿ ಗೌರವಿಸಬೇಕೆಂಬ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ.
    ನನಗೆ ಉತ್ತಮ ಶಿಕ್ಷಣದ ಹಕ್ಕು ಇದೆ ಮತ್ತು ಎಲ್ಲ ಮಕ್ಕಳೂ ಶಾಲೆಗೆ ಹೋಗಬೇಕೆಂದು ಪ್ರೋತ್ಸಾಹಿಸುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ (ಅಧಿನಿಯಮ 23, 28, 29)
    ನನಗೆ ಉತ್ತಮ ಆರೋಗ್ಯ, ಆರೈಕೆಗೆ ಹಕ್ಕು ಇದೆ ಮತ್ತು ಇತರರ ಉತ್ತಮ ಆರೋಗ್ಯ ಆರೈಕೆ ಮತ್ತು ಸುರಕ್ಷಿತ ನೀರು ಪಡೆಯಲು ಸಹಾಯ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ. (ಅಧಿನಿಯಮ 24)
    ನನಗೆ ಉತ್ತಮ ಆಹಾರದ ಹಕ್ಕು ಇದೆ ಮತ್ತು ಜನರು ಉಪವಾಸವಿರುವುದನ್ನು ನಿವಾರಿಸುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ. (ಅಧಿನಿಯಮ 24)
    ನನಗೆ ಉತ್ತಮ ಪರಿಸರದ ಹಕ್ಕು ಇದೆ ಮತ್ತು ಅದನ್ನು ಮಲಿನಗೊಳಿಸದೇ ಇರುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ (ಅಧಿನಿಯಮ 29)
    ನನಗೆ ಆಟವಾಡುವ ಮತ್ತು ವಿಶ್ರಮಿಸುವ ಹಕ್ಕು ಇದೆ (ಅಧಿನಿಯಮ 31)
    ಪೋಷಣೆ ಹಾಗೂ ಸಂರಕ್ಷಣೆ
    ನನಗೆ ಪ್ರೀತಿಸಲ್ಪಡುವ ಹಕ್ಕು ಇದೆ ಮತ್ತು ಅಪಾಯ ಹಾಗೂ ದುರುಪಯೋಗದಿಂದ ರಕ್ಷಿಸಲ್ಪಡುವ ಹಕ್ಕು ಇದೆ ಮತ್ತು ಪ್ರತಿಯೊಬ್ಬರಿಗೂ ಇತರರನ್ನು ಪ್ರೀತಿಸುವ ಮತ್ತು ಆದರಿಸುವ ಹೊಣೆಗಾರಿಕೆ ಇದೆ (ಅಧಿನಿಯಮ 19)
    ನನಗೆ ಒಂದು ಕುಟುಂಬದ ಮತ್ತು ಸುರಕ್ಷಿತ, ಅನುಕೂಲವಾದ ಮನೆ ಹೊಂದುವ ಹಕ್ಕು ಇದೆ ಮತ್ತು ಎಲ್ಲ ಮಕ್ಕಳೂ ಒಂದು ಕುಟುಂಬ ಹಾಗೂ ಮನೆ ಹೊಂದಿರುವುದನ್ನು ಖಾತ್ರಿ ಪಡಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ (ಅಧಿನಿಯಮ 9, 27)
    ನನ್ನ ಪರಂಪರೆ ಮತ್ತು ನಂಬಿಕೆಗಳ ಪ್ರತಿ ನಾನು ಹೆಮ್ಮೆ ಪಡುವ ಹಕ್ಕು ನನಗಿದೆ ಮತ್ತು ಇತರರ ಸಂಸ್ಕೃತಿ ಮತ್ತು ನಂಬಿಕೆಗಳನ್ನು ಗೌರವಿಸುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ (ಅಧಿನಿಯಮ 29, 30)
    ನಾನು ಹಿಂಸೆ ಮತ್ತು ದಂಡನೆ (ವಾಕ್, ದೈಹಿಕ ಮತ್ತು ಭಾವನಾತ್ಮಕ) ರಹಿತ ಜೀವನ ನಡೆಸುವ ಹಕ್ಕು ಹೊಂದಿದ್ದೇನೆ ಮತ್ತು ಇತರರನ್ನು ಹಿಂಸಿಸದೇ ಇರುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ. (ಅಧಿನಿಯಮ 2, 28, 37, 39)
    ನನಗೆ ಆರ್ಥಿಕ ಹಾಗೂ ಲೈಂಗಿಕ ಶೋಷಣೆಯಿಂದ ಸಂರಕ್ಷಿಸಲ್ಪಡುವ ಹಕ್ಕು ಇದೆ ಮತ್ತು ಯಾವುದೇ ಮಗು ದುಡಿಯಲು ಬಲಾತ್ಕರಿಸದೇ ಮುಕ್ತವಾದ ರಕ್ಷಿತ ಪರಿಸರ ಹೊಂದಲು ಖಾತ್ರಿ ಪಡಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ. (ಅಧಿನಿಯಮ 32, 34)
    ನನಗೆ ಎಲ್ಲ ರೀತಿಯ ಶೋಷಣೆಗಳಿಂದ ಸಂರಕ್ಷಿಸಲ್ಪಡುವ ಹಕ್ಕು ಇದೆ ಮತ್ತು ನನ್ನನ್ನು ಹೇಗೆ ಬೇಕಾದರೂ ಉಪಯೋಗಿಸಕೊಳ್ಳದಂತೆ ಖಾತ್ರಿ ಪಡಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ
    ಮಕ್ಕಳನ್ನು ಕುರಿತಾಗಿ ತೆಗೆದುಕೊಳ್ಳುವ ಎಲ್ಲ ಕ್ರಮಗಳಲ್ಲಿಯೂ ಮಕ್ಕಳ ಅನುಕೂಲವೇ ಪ್ರಾಥಮಿಕವಾಗಿ ಪರಿಗಣಿಸಲ್ಪಡಬೇಕು.
    ಮಕ್ಕಳ ಹಕ್ಕುಗಳ ಮೇಲಿನ ಸಂಯುಕ್ತರಾಷ್ಟ್ರಗಳ ಸಮ್ಮೇಳನ 1989 ರಲ್ಲಿ ಈ ಎಲ್ಲ ಹಕ್ಕು ಮತ್ತು ಹೊಣೆಗಾರಿಕೆಗಳುಉಲ್ಲೇಖಿಸಲ್ಪಟ್ಟಿವೆ.
    ಪ್ರಪಂಚದೆಲ್ಲೆಡೆ ಮಕ್ಕಳು ಹೊಂದಿರುವ ಎಲ್ಲ ಹಕ್ಕುಗಳನ್ನೂ ಇದು ಹೊಂದಿದೆ. ಭಾರತ ಸರ್ಕಾರವು 1992 ರಲ್ಲಿ ಈ ದಾಖಲೆಗೆ ಸಹಿಹಾಕಿತು.
_____________________________________________

ಮಕ್ಕಳಿಗಾಗಿ POCSO ಇ-ಬಾಕ್ಸ್


ಭಾರತದಲ್ಲಿ ಮಕ್ಕಳ ವಿರುದ್ಧ ಅಪರಾಧ

ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳು ಅತಿರೇಕದ ಹಂತ ತಲುಪಿದೆ ಆದರೆ ಕೇವಲ ಅಲ್ಪ ಪ್ರಮಾಣದಲ್ಲಿ ಶೇಕಡಾವಾರು ವರದಿ ಮುಟ್ಟುತ್ತದೆ. ಒಂದು ಅಧ್ಯಯನದ ಪ್ರಕಾರ, ಮಕ್ಕಳ ಬಗ್ಗೆ ಸಮೀಕ್ಷೆ ನಡಿಸಿದನಂತರ  53%  ಮಕ್ಕಳು ತಮ್ಮ ಜೀವಿತಾವಧಿಯಲ್ಲಿ  ಒಮ್ಮೆ ಅಥವಾ ಹೆಚ್ಚುಬಾರಿ  ಲೈಂಗಿಕ ದುರ್ಬಳಕೆಯ ಇತರ ರೂಪ ಎದುರಿಸಿದ ವರದಿಯಾಗಿದೆ.
ಹೆಚ್ಚಿನ ಸಂದರ್ಭಗಳಲ್ಲಿ, ಅಪರಾಧಿಯು ಕುಟುಂಬದ ಸದಸ್ಯ / ಹತ್ತಿದರ ಸಂಬಂಧಿ ಅಥವಾ ಪರಿಚಯಸ್ತ ರಾಗಿರುತ್ತಾರೆ.
ಅಂತಹ ಸಂದರ್ಭಗಳಲ್ಲಿ  ಬಲಿಯಾದ ಮಗು  ಸಾಮಾನ್ಯವಾಗಿ ಈ ಆರೋಪಗಳ ವರದಿ ಮಾಡುವುದಿಲ್ಲ
ಲೈಂಗಿಕ ನಿಂದನೆ ಮಗುವಿನ ಮನಸ್ಸಿನಲ್ಲಿ ಜೀವನಪರ್ಯಂತ ಪೀಡಿತವಾಗಿರುತ್ತದೆ. ಲೈಂಗಿಕ ದುರುಪಯೋಗಕ್ಕೆ ಒಳಪಟ್ಟ ಮಗು ಅರಿವಿನ ಕೊರತೆ, ಖಿನ್ನತೆ ಮತ್ತು ಆತಂಕದ ಸೇರಿದಂತೆ ಮುಂತಾದ ಹಿಂಸಾತ್ಮಕ ಮತ್ತು ಅಪಾಯ ನಡವಳಿಕೆ ಬಹಳ ಗಂಭೀರ ಪರಿಣಾಮಗಳು ಎದುರಿಸಬೇಕಾಗುತ್ತದೆ. ಲೈಂಗಿಕ ದುರುಪಯೋಗಪಡಿಸಿಕೊಂಡ ಮಗು  ಅವಮಾನ ಮತ್ತು ತಪ್ಪಿತಸ್ಥ ಭಾವನೆ ಕೀಳು ಆತ್ಮಗೌರವದ ಇಂತಹ ದುಷ್ಪರಿಣಾಮ ಗಳನ್ನುಗಳನ್ನಎದುರಿಸುತ್ತದೆ .

ಮಕ್ಕಳಿಗಾಗಿ POCSO ಇ-ಬಾಕ್ಸ್

ಪೋಸ್ಕೋ ಇ ಬಾಕ್ಸ್ ಪ್ರವೇಶಿಸಲು, ಇಲ್ಲಿ ಕ್ಲಿಕ್ಕಿಸಿ
ಮಕ್ಕಳ ಹಕ್ಕುಗಳ ರಕ್ಷಣೆಯ  ರಾಷ್ಟ್ರೀಯ ಆಯೋಗ(NCPCR) ದ ವೆಬ್ ಸೈಟ್ ನ  ಮುಖಪುಟದಲ್ಲಿ ಎದ್ದುಕಾಣುವಂತೆ ( ಈ ಕೆಳಗೆ ಕಾಣಿಸಿದಂತೆ) ಅಳವಡಿಸಲಾಗಿದೆ. ಅದರಲ್ಲಿ ಬಳಕೆದಾರ ಸುಲಭವಾಗಿ ಲಭ್ಯವಿರುವ   ಪೋಸ್ಕೋ ಇ-ಬಾಕ್ಸ್ ಎಂಬ ಬಟನ್  ಒತ್ತೆದರೆ ಸಾಕು.

ಹಂತ 1 ಇದು ಅನಿಮೇಷನ್ ಚಿತ್ರ ಹೊಂದಿರುವ ವಿಂಡೋ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ. ಅನಿಮೇಷನ್ ಚಿತ್ರದಲ್ಲಿ ಮಗುವಿಗೆ ಒಬ್ಬ ಸ್ನೇಹಿತನ ರೀತಿಯಲ್ಲಿ ವಿವರಣೆ ನೀಡಲಾಗುತ್ತದೆ ಅದರಿಂದ ಮಗುವಿಗೆ ಅದರಜೊತೆ ನಡೆದ ದೌಜನ್ಯಕ್ಕೆ ತಾನು ಕಾರಣ ವಲ್ಲ ತನ್ನಿಂದ ಆದ ತಪ್ಪು ಇದಲ್ಲ ಮುಂತಾದ ತಪ್ಪಿತಸ್ಥ ಭಾವನೆಯನ್ನು ಹೋಗಲಾಡಿಸುವ ರೀತಿ ಮತ್ತು NCPCR ತನ್ನ ಸಹಾಯ ಮಾಡುವ ಒಂದು ಸ್ನೇಹಿತ ಎಂದು ತಿಳಿಸಲಾಗುತ್ತದೆ.
ಹಂತ 2
ಬಳಕೆದಾರ ಪುಟದಲ್ಲಿ ಇರುವ  ಬಾಣದ ಗುರುತನ್ನು ಒತ್ತಿದ ತಕ್ಷಣ ಅದು ಮುಂದಿನ ಪುಟಕ್ಕೆ ಕೊಂಡೊಯುತ್ತದೆ ಅದರಲ್ಲಿ ತೂರಿಬರುವ ಚಿತ್ರಗಳಲ್ಲಿ   ಅವನು / ಅವಳು ಕನಿಷ್ಠ ಒಂದು ಚಿತ್ರವನ್ನು ಆಯ್ಕೆಮಾಡಬಹುದು ( ತನಗಾದ ಕಿರುಕುಳ ವರ್ಗ ಅನುಸರಿಸಿ)
ಹಂತ 3 :
ಲಭ್ಯವಿರುವ ಅರ್ಜಿನ್ನು ಭರ್ತಿ ಮಾಡಬೇಕು ಅದರಲ್ಲಿ ಮೊಬೈಲ್ ನಂಬರ್ , ಇ ಮೇಲ್ ಐ ಡಿ  ಮತ್ತು ಒಳಗಾದ ದೌರ್ಜನ್ಯ ವನ್ನು ನಮೂದಿಸಿ 'ಸಬ್ ಮೀಟ್ ' ಬಟನ್ ಅನ್ನು ಒತ್ತಬೇಕು. ತಕ್ಷಣದಲ್ಲಿ ಆಟೋ ಜನರೇಟ್ ಆಗಿ ಒಂದು ಸ್ವಯಂರಚಿತ ದೂರುಸಂಖ್ಯೆ ತೂರಿಬರುವುದು

POCSO ಕಾಯಿದೆ ಬಗ್ಗೆ

ಮಕ್ಕಳ ವಿರುದ್ಧ ಅಪರಾಧಗಳ ಬಗ್ಗೆ ಕಾಳಜಿ ರೀತಿಯಲ್ಲಿ
ಸರ್ಕಾರವು  ಮಕ್ಕಳನ್ನು ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ಅಪರಾಧಗಳಿಂದ
ರಕ್ಷಿಸಲು POCSO ಆಕ್ಟ್  20012 ಅನ್ನು ಜಾರಿಗೆ ತಂದಿದೆ. ಪ್ರತಿ ಹಂತದಲ್ಲಿ ಮಗುವಿನ ಆಸಕ್ತಿ ಸಂರಕ್ಷಿಸುವ ಅಗತ್ಯವಿದ್ದ  ಸಂದರ್ಭದಲ್ಲಿ ಗೊತ್ತುಪಡಿಸಿದ ವಿಶೇಷ ನ್ಯಾಯಾಲಯಗಳ ಮೂಲಕ ಸಾಕ್ಷಿ, ತನಿಖೆ ಮತ್ತು ಅಪರಾಧಗಳ ತ್ವರಿತ ವಿಚಾರಣೆಗಾಗಿ ರೆಕಾರ್ಡಿಂಗ್, ವರದಿ,ಮಕ್ಕಳ ಸ್ನೇಹಿ ನ್ಯಾಯಯುತ ಕಾರ್ಯಗಳನ್ನು ರೂಪಿಸುವಲ್ಲಿ ಕಟಿಬದ್ಧವಾಗಿದೆ
POCSO ಕಾಯಿದೆಯಡಿ ೧೮ ವರ್ಷದ ಒಳಗಿನ ಯಾವುದೇ ಮಾನವರನ್ನು ಬಾಲ್ಯದಲ್ಲಿರುವವರು  ಗುರುತಿಸಲಾಗುವುದು